Vedantic Parable•5 min read
ನಮ್ಮಂತಹ ಸತ್ಯದ ಅನ್ವೇಷಣೆಯಲ್ಲಿ ತೊಡಗಿರುವ ಜನರಿಗಾಗಿ ಇಂದಿನ ಉದಯವಾಣಿಯಲ್ಲಿ ಪ್ರಕಟ ಆದ ಬರಹ
Jyothi shettyVedantic Wisdom Tradition
*ನಮ್ಮನು ನಾವು ಮರೆತರೆ ಸತ್ಯದ ಅರಿವು*
ನಾವು ಮನಸ್ಸನ್ನು ಶೋಧಿಸಿದ್ದೇವೆಯೇ ಅಥವಾ - ನಾವೇ ಅದರ ಬಂಧನಕ್ಕೆ ಒಳಗಾಗಿದ್ದೇವೆಯೇ? ಎಲ್ಲವೂ ಮಿಥ್ಯ ಎಂದಾದರೆ ಯಾವುದು ಸತ್ಯ? ನಮ್ಮ ಅಸ್ತಿತ್ವವೋ? ನಮ್ಮ ಮನಸೋ..?
ಇಂದು ನಮ್ಮ ಮುಂದೆ ಸಮಸ್ಯೆಗಳೆಂಬ ಪರ್ವತಗಳಿವೆ, ಬೆಟ್ಟಗುಡ್ಡಗಳಿವೆ, ಕಡಿದಾದ ಮಾರ್ಗಗಳಿವೆ. ಅವುಗಳನ್ನು ದಾಟುವುದು, ಏರು ವುದು, ಮೀರುವುದು ಹೇಗೆ ಎಂಬುದು ಎಲ್ಲರ ಆತಂಕ. ಆದರೆ ನಿಜವಾಗಿಯೂ ಈ ಎಲ್ಲವೂ ಇವೆ ಯೇ?, ಅಲ್ಲ ನಾವು ಸೃಷ್ಟಿಸಿಕೊಂಡಿದ್ದೇವೆಯೇ? ಅಥವಾ ವಾಸ್ತವವಾಗಿ ಅವುಗಳು ಏನು?, ಇವುಗಳು ನಮ್ಮನ್ನು ಇಂದು ಹೇಗೆ ಬಾಧಿಸುತ್ತಿವೆ?-ಈ ಎಲ್ಲ ಪ್ರಶ್ನೆಗಳ ಕುರಿತಂತೆ ಸುಮ್ಮನೆ ಕೆಲವು ಕ್ಷಣಗಳ ಕಾಲ ಯೋಚಿಸೋಣ...
ನಿಮ್ಮನ್ನು ಯಾರೂ ಇಲ್ಲಿ ಬೆಟ್ಟ ಹತ್ತಲು ಹೇಳುತ್ತಿಲ್ಲ. ಹೌದಲ್ಲವೇ.. ನಿಮ್ಮನ್ನು ಯಾರೂ - ಹೇಳುತ್ತಿಲ್ಲ ಸಂಸಾರ ಬಿಡಿ, ಕೆಲಸ ಬಿಡಿ, ಬೆಟ್ಟದ ಮೇಲೆ ಹೋಗಿ ಕುಳಿತುಕೊಳ್ಳಿ ಎಂದು. ಇಲ್ಲ! > ಎಲ್ಲವೂ ಹಾಗೆಯೇ ಇರಲಿ ಬಿಡಿ. ನಾವು ಇವೆಲ್ಲವೂ ಎಲ್ಲಿದೆ ಎಂಬುದನ್ನು ಗುರುತಿಸೋಣ. ಅದು ಈ ಎಲ್ಲಿದೆ ಎಂದು ಸಿಕ್ಕರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತೆ ಅಲ್ಲವೇ. ನಮ್ಮ ಆಲೋಚನೆಗಳನ್ನು ನಮ್ಮ ಮನಸ್ಸಿನೆಡೆಗೆ ಕೇಂದ್ರೀಕರಿಸೋಣ.
ಈಗ ನಮ್ಮ ಅರಿವಿಗೆ ಒಂದು ಕ್ಷಣವನ್ನು ನೀಡೋಣ, ಎಲ್ಲಿದೆ ಎಲ್ಲವೂ ಬಾಹ್ಯದಲ್ಲೋ, ಅಂತರಂಗದಲ್ಲೋ. ಇಲ್ಲ ಅದು ನಮ್ಮ ಹೊರಗೆ ಇಲ್ಲ. ನಮ್ಮೊಳಗಿದೆ. ನಮ್ಮ ಮನಸ್ಸಿನಲ್ಲಿದೆ. ಹಾಗಾದರೆ ನಾವು ಎಲ್ಲವೂ ಹೊರಗಿವೆ ಎಂದು ಬಂಧನಕ್ಕೊಳಗಾಗಿದ್ದೇವೆಯೇ ವಿನಾ ನಮ್ಮೊಳಗೆ ನಾವು ನೋಡಿಕೊಂಡಿಲ್ಲ. ಮನಸ್ಸು-ಹೃದಯವನ್ನು ಸೇರಿಸೋಣ ಎಲ್ಲವನ್ನೂ ಬಿಟ್ಟು ಎಷ್ಟು ಹಗುರ ಈಗ ಮನಸ್ಸು.
ಒಬ್ಬರು ನನ್ನನ್ನು ಕೇಳಿದರು, 'ಪ್ರತೀ ಅಣುವಿನ ಚಲನೆಯೂ ದೇವರ ಇಚ್ಛೆ ಎಂದು ನೀವು ಹೇಳು ತ್ತೀರಿ, ನನಗೆ ಅದರ ಅರಿವಾಗಲು ಸಾಧ್ಯವೇ? ನಾನು ಪ್ರತೀಕ್ಷಣದಲ್ಲೂ ಅದನ್ನು ಅನುಭವಿಸಬೇಕು' ಎಂದು.
ಇದನ್ನು ಕಂಡುಕೊಳ್ಳುವ ಮಾರ್ಗ ಸರಳ. ಇದನ್ನು ನೀವೂ ತಿಳಿದಿದ್ದೀರಿ. ಆದರೆ ಅದನ್ನು ಮರೆತಿದ್ದೀರಿ ಅಷ್ಟೇ.., ಹೌದು. ನಮ್ಮನ್ನು ನಾವು ಕಂಡುಕೊಳ್ಳಲು, ಏನನ್ನೋ ತೆಗೆದುಹಾಕಬೇಕು. ಅದುವೇ ನಾವು ನಮ್ಮನ್ನೇ ಮರೆಯಬೇಕು.
ಅಂದರೆ ನಮಗೆ ನಮ್ಮ ಬಗ್ಗೆ ಇರುವ ಎಲ್ಲ ಕಲ್ಪನೆ ಗಳನ್ನೂ ಬಿಟ್ಟುಬಿಡಬೇಕು ಎಂದರ್ಥ. ಮನಸ್ಸಿನ ಆಚೆ ನಮ್ಮ ಅಸ್ತಿತ್ವವನ್ನು ಇಟ್ಟಿದ್ದೇವೆ. ಹೀಗಾಗಿ ನಮ್ಮನ್ನು ನಾವೇ ಕಂಡುಕೊಳ್ಳಲು ಸಾಧ್ಯವಿಲ್ಲ.
ನಮ್ಮ ತೊಂದರೆ ಏನೆಂದರೆ ನಾವು ಯಾವಾ ಗಲೂ ಮನಸ್ಸಿನ ಮೇಲೆ ಮನಸ್ಸಿಟ್ಟಿರುತ್ತೇವೆ. ಆ ಅಸ್ಥಿರ ಮನಸ್ಸಿನ ಪ್ರಭಾವ ಎಷ್ಟು ಗಾಢವಾಗಿದೆ ಎಂಬುದು ನಮಗೆ ಗೊತ್ತಿಲ್ಲ.
ನಿಮ್ಮ ಗಮನ ಅಸ್ತಿತ್ವದ ಮೇಲೆ ಅಂದರೆ 'ಬೀಯಿಂಗ್ ನೆಸ್' ಮೇಲೆ ಇರಬೇಕು. ನಾವೇನಾ ಗಬೇಕು ಎಂಬುದು ಮುಖ್ಯವೇ, ನಮ್ಮ ಮುಂದಿ ರುವ, ನಾವೇ ಕಲ್ಪಿಸಿಕೊಂಡಿರುವ ಸಮಸ್ಯೆಯ ಬೆಟ್ಟವನ್ನು ಮನಸ್ಸಿನಲ್ಲಿ ಹೊತ್ತುಕೊಂಡು ತಿರುಗು ವುದು ಮುಖ್ಯವೇ. ನಾವು ಯಾವಾಗಲೂ ಎರಡನೆ ಯದ್ದನ್ನೇ ಮಾಡುತ್ತಿರುತ್ತೇವೆ. ಹೀಗಾಗಿ ನಮ್ಮ ಮೇಲೆ ಪರಿಣಾಮ ಬೀರುವುದು ಸಾಮಾನ್ಯ ವಾಗಿ ಗಮನ ಕೊಡುವ, ಕಣ್ಣಿಗೆ ಕಾಣುವ, ಮುಟ್ಟಬಹು ದಾದ ವಸ್ತುಗಳ ಮೇಲೆ ಮಾತ್ರ. ಆದರೆ 'ಅಸ್ತಿತ್ವ'ಕ್ಕೆ ಯಾವ ಬಣ್ಣ?, ಯಾವ ಆಕಾರ?, ಯಾವ ಗಾತ್ರ?, ಕಣ್ಣಿಗೆ ಕಾಣಿಸದ ಆ ಅರಿವು ಹೇಗೆ ಸಾಧ್ಯ? ಆ ಅರಿವು ಸಾಧ್ಯವಾದರೆ ಪ್ರತೀ ಕಣದ, ಕ್ಷಣದ ಚಲನೆಯ ಇಚ್ಛೆ ಯಾರದ್ದು ಎಂದು ಅರಿ ಯಲು ಸಾಧ್ಯವಾಗುತ್ತದೆ ಮತ್ತು ಅದನ್ನು ನೀವು ಅನುಭವಿಸಬಲ್ಲಿರಿ.
ಆಕಾಶದ ಹಾಗೆ ನಿಮ್ಮ ಅಸ್ತಿತ್ವ: ನಿಮ್ಮ ಅಸ್ತಿತ್ವ ಆಕಾಶ
ಹಾಗೆ ಮಿತಿಯಿಲ್ಲದ್ದು. ನಿಮ್ಮ ಯೋಚನೆಗಳು, ಭಾವನೆಗಳು, ನೆನಪುಗಳು, ಆಸೆಗಳು ಇವೆಲ್ಲ ಆಕಾಶದಲ್ಲಿ ತೇಲುವ ಮೋಡಗಳ ಹಾಗೆ. ಮೋಡ ಬರುತ್ತದೆ, ಹೋಗುತ್ತದೆ. ಚಂದ್ರ, ತಾರೆಗಳು ಎಲ್ಲವೂ ತಾತ್ಕಾಲಿಕ ಅತಿಥಿಗಳು. ಆದರೆ ಆಕಾಶ?
ಆಕಾಶ ಬದಲಾಗುವುದಿಲ್ಲ. ಏನು ಬಂದರೂ ಅಂಟಿಕೊಳ್ಳುವುದಿಲ್ಲ ಎಲ್ಲವೂ ಪ್ರವಾಸಿಗಳಂತೆ. ಬರುತ್ತವೆ, ಹೋಗುತ್ತವೆ. ಈಗ ನಮ್ಮ ಮನಸ್ಸನ್ನು ಗಮನಿಸೋಣ. ಅಲ್ಲಿಯೂ ದಟ್ಟ ಸಂಚಾರವನ್ನು ನಾವು ಕಾಣುತ್ತೇವೆ. ನೀವು ಅವುಗಳನ್ನು ಗುರುತಿ ಸಲು ಪ್ರಯತ್ನಿಸಿ. ನಮ್ಮ ಮನಸ್ಸಿನಲ್ಲಿ ಬರುವ 5 ಸಂಚಾರಗಳು ಹಲವು ಬರುತ್ತವೆ, ಹೋಗುತ್ತವೆ. ಅದು ಕ್ಷಣಿಕವೇ? ಮನಸ್ಸಿನ ಸಂಚಾರ ವನ್ನು ಭಾವ ನೆ ಗಳನ್ನು ವ್ಯಕ್ತಿತ್ವ ಇನ್ನೂ ಹಲವು ಬಂದು ಹೋಗು ತ್ತವೆ. ಉಳಿಯುವುದು ಏನು? ನೀವು ಎಂದಾ ದರೂ ಗುರುತಿಸಿದ್ದೀರಾ? ಏನು ಉಳಿಯುತ್ತದೆ.
ಮನಸ್ಸಿನಲ್ಲಿ ಏನೇ ಬಂದರೂ ಎಷ್ಟೇ ದೊಡ್ಡ ಆಲೋಚನೆಗಳು ಬಂದರೂ ಅದು ನಭದಲ್ಲಿನ ಮೋಡ, ನಕ್ಷತ್ರಗಳ ಹಾಗೆ ತಾತ್ಕಾಲಿಕ. ನೀವು ಯೋಚಿಸಿ ನೋಡಿ ನಿಮ್ಮ ವ್ಯಕ್ತಿತ್ವವಾದರೂ ಉಳಿ ಯುತ್ತದೆಯೇ? ಇಲ್ಲ, ಅದೂ ಅವ್ಯಕ್ತ. ಇದು ತಾತ್ವಿಕ ಚರ್ಚೆಯಲ್ಲ. ಇದು ನಿಮ್ಮನೇರ ಅನುಭವಕ್ಕೆ ಸಿಗುವಂತಹದ್ದು ಅನುಭವಿಸಬಲ್ಲಿರಿ. ನೀವು ಈಗ
ಏನು ಹೊಂದಿದ್ದರೂ ಕಳೆದುಕೊಳ್ಳುತ್ತೇವೆ. ಬಂದದ್ದೆಲ್ಲ ಹೋಗುತ್ತದೆ. ನಮ್ಮ ದೇಹ ಪ್ರತೀ ದಿನ ಕನ್ನಡಿಯಲ್ಲಿ ಬದಲಾಗುತ್ತಿರುತ್ತದೆ. ಅದನ್ನು ನಾವೇ ನೋಡುತ್ತೇವೆ. ಇದನ್ನು ಶಪಿಸಬೇಡಿ. ಇದು ದೇವರ ನಿಯಮ. ರೂಪ ತಾಳಿದ್ದೆಲ್ಲ ಅಶಾಶ್ವತ. ಅದು ಬರುತ್ತದೆ, ಆಡುತ್ತದೆ, ಹೋಗುತ್ತದೆ. ಇದನ್ನು ಇದನ್ನು ಸ್ಪಷ್ಟ ವಾಗಿ ಕಂಡಾಗ ಅಶಾಶ್ವತಕ್ಕೆ ಅಂಟಿಕೊಳ್ಳುವುದು ಬುದ್ದಿಮಾಂದ್ಯತೆ ಎನಿಸಿಕೊಳ್ಳುತ್ತದೆ. ಅದನ್ನು ತಿರಸ್ಕ ರಿಸಬೇಕಿಲ್ಲ. ಬರೀ ನೋಡಿ. ಅದರ ಲಿಂಗ ಏನು?, ಧರ್ಮ ಏನು? ಅದು ಕಂಡುಬರುವುದಿಲ್ಲ.
ಇದು ನಿಮ್ಮಲ್ಲಿನೋವು ತರುತ್ತದೆಯೇ? ದುಃಖ
ತರುತ್ತದೆಯೇ? ಅನುಗ್ರಹ ಸ್ಪರ್ಶಿಸಿದಾಗ, ಮೊದಲ ದಿನಗಳಲ್ಲಿ ನಿಮ್ಮೊಳಗಿನ ಹಳೆಯ ನೋವು, ಭಯ, ಭಾವನೆಗಳು ಮೇಲೆ ಬರುತ್ತವೆ. ಓಡಬೇಡಿ. ಅದನ್ನು ಹಾಗೆಯೇ ಇರಲು ಬಿಡಿ, ಅದು ಬಗೆಹರಿ ಯುತ್ತಿದೆ ಎಂದು ತಿಳಿಯಿರಿ. ಒಂದೊಂ ದಾಗಿ ಬಂದು ಹೋಗುತ್ತವೆ. 'ಯುರೇಕಾ!' ಎನ್ನಬೇಡಿ. 'ಮುಗಿಯಿತು' ಎಂದು ತೀರ್ಪು ಕೊಡಬೇಡಿ. ಬರೀ ಗಮನಿಸಿ. ಆಗ ನಿಮ್ಮ ನಿಜ ಸ್ವಭಾವ; ಪ್ರಪಂಚ ಕಲಿಸಲಾರದ ಆಳವಾದ ಸ್ವಭಾವ ನಿಧಾನವಾಗಿ ಅನಾವರಣಗೊಳ್ಳುತ್ತದೆ.
ನಮ್ಮ ಜೀವ ಮೂರು ಮಜಲಿನದ್ದು ದೇಹ, ವ್ಯಕ್ತಿತ್ವ ಅಥವಾ ಮನಸ್ಸು ಮತ್ತು ಸಾಕ್ಷಿ ಅಥವಾ ಆತ್ಮ ಅದರಲ್ಲಿ ಒಂದು ಕಾಲಕ್ಕೆ ಸೇರಿದ್ದು, ಕನ್ನಡಿ ಯಲ್ಲಿ ನೋಡಿದಾಗ ಬದಲಾಗುತ್ತಿರುವ ದೇಹ ಕಾಣುತ್ತದೆ. ಅದೂ ಸಾಕ್ಷಿಗೆ ಗೋಚರಿಸುತ್ತದೆ. ಹಿಮ ಮತ್ತು ನೀರು ಒಂದೇ. ಬೆಚ್ಚಗಿನ ನೀರಿನ ಬಟ್ಟಲಿನಲ್ಲಿ *ಐಸ್ ನಿಧಾನವಾಗಿ ಕರಗುತ್ತದೆ. ವ್ಯಕ್ತಿತ್ವ ಹಾಗೆ ಕರಗಿ ಅಸ್ತಿತ್ವದಲ್ಲಿ ಸೇರಿಕೊಳ್ಳುತ್ತದೆ. ಬೇರೆ ಸಾಧನೆ ಏನೂ ಬೇಡ. ಕೇವಲ ಈ ಒಂದು ಅಭ್ಯಾಸ ಪ್ರತೀ ದಿನ ಹಿ ಕನಿಷ್ಠ ಅರ್ಧ ಗಂಟೆ ಕುಳಿತು, ಮನಸ್ಸಿನ ಚಲನೆ ಯನ್ನು ನೋಡುತ್ತ, ಅದರ ಹಿಂದೆ ಹೋಗದೆ, ಬರೀ 'ಇರುವಿಕೆ'ಯನ್ನು ಗುರುತಿಸಿ. ಚಿತ್ರಗಳಿಲ್ಲ.
ನೆನಪಿಲ್ಲ..ಕಥೆಗಳಿಲ್ಲ.