Atma Vichara•Aug 9, 2026•2 min read
ಅರಿದೆವರಿದೆವೆಂಬಿರಿ ಅರಿದ ಪರಿಯೆಂತು ಹೇಳಿರೆ ?
ಶ್ರೀ ರಾಂ
Maya Mukti Contemplator
Connected video inquiry from Maya Mukti channel
ಅರಿದೆವರಿದೆವೆಂಬಿರಿ ಅರಿದ ಪರಿಯೆಂತು ಹೇಳಿರೆ ?
ಅರಿದವರು ಅರಿದೆವೆಂಬರೆ ?
ಅರಿಯಬಾರದ ಘನವನರಿದು,
ಅರಿಯದಂತಿಪ್ಪರು ಗುಹೇಶ್ವರಾ.
ಅಲ್ಲಮರ ಈ ವಚನ ಸರಳವಾಗಿ ಅರ್ಥ ಮಾಡಿಕೊಳ್ಳೋದಾದ್ರೆ:
ನಾವಿಲ್ಲಿ ಒಂದೆರಡು ಪುಸ್ತಕ ಓದಿ, ಅಥವಾ ಯಾರದ್ದೋ ಪ್ರವಚನ ಕೇಳಿ *ನನಗೆಲ್ಲ ಅರ್ಥ ಆಗಿಬಿಟ್ಟಿದೆ* ಅಂದುಕೊಳ್ಳುತ್ತೀವಲ್ವಾ? ಆದರೆ ನಿಜವಾಗಿ ಆ ಸತ್ಯವನ್ನು ಕಂಡುಕೊಂಡವನು ಯಾವತ್ತಾದರೂ "ನನಗೆ ಗೊತ್ತು" ಅಂತ ಪ್ರದರ್ಶನ ಮಾಡ್ತಾನಾ?
ತಲೆಯಿಂದ ಅಥವಾ ಬುದ್ಧಿಯಿಂದ ಕಷ್ಟಪಟ್ಟು ಕಲಿಯೋಕೆ ಆಗದಿರೋ ಆ ಪರಮ ಸತ್ಯವನ್ನು ಅರಿತ ಮೇಲೆ, ಮನುಷ್ಯನಿಗೆ ತನ್ಮಧ್ಯೆ ಇದ್ದ ಅಹಂಕಾರವೆಲ್ಲ ತಾನಾಗಿಯೇ ಕರಗಿಹೋಗುತ್ತೆ. ಆಮೇಲೆ ಆತ ಹೊರಗಿನ ಜಗತ್ತಿಗೆ ತೀರಾ ಸಾಮಾನ್ಯನಾಗಿ, ಏನೂ ತಿಳಿಯದವನಂತೆ ಮೌನವಾಗಿ ಇರ್ತಾನೆ.
ನಮ್ಮ ಅಂತರಂಗಕ್ಕೆ ಇದು ಹೇಗೆ ಬೆಳಕು?
ಗೊತ್ತು ಅನ್ನೋದು ಮಾಹಿತಿ, ಅರಿವು ಅನ್ನೋದು ಶಾಂತಿ: ತಲೆಯಲ್ಲಿ ವಿಷಯಗಳನ್ನು ತುಂಬಿಕೊಳ್ಳುವುದು ಬರಿ ಮಾಹಿತಿ ಅಷ್ಟೇ. ಆದರೆ ನಿಜವಾದ ಜ್ಞಾನ ದರ್ಶನವಾದಾಗ ಅಲ್ಲಿ ಮಾತುಗಳಿಗಿಂತ ಹೆಚ್ಚಾಗಿ ಒಳಗೆ ಒಂದು ಪ್ರಶಾಂತತೆ ಬಂದುಬಿಡುತ್ತೆ.
ನನಗೆ ಗೊತ್ತು ಅಂತ ಹೇಳೋಕೆ ಅಲ್ಲಿ ಅಹಂಕಾರ ಇರಬೇಕಲ್ವಾ? ಆದರೆ ಆ ಶುದ್ಧ ಅರಿವು ಮೂಡಿದಾಗ "ನಾನು" ಅನ್ನೋ ಆ ಅಹಂಕಾರವೇ ಇರೋದಿಲ್ಲ.
ನದಿ ಹರಿದು ಹೋಗಿ ಸಮುದ್ರವನ್ನು ಸೇರಿದ ಮೇಲೆ ಹೇಗೆ ತನ್ನ ಪ್ರತ್ಯೇಕ ಗುರುತು ಬಿಟ್ಟು ಶಾಂತವಾಗುತ್ತೋ, ಹಾಗೆ ನಿಜವಾದ ಜ್ಞಾನಿ ತನ್ನ ಜ್ಞಾನವನ್ನು ಎಲ್ಲೂ ಪ್ರದರ್ಶಿಸಲು ಹೋಗಲ್ಲ. ತೀರಾ ಸರಳವಾಗಿ ಬದುಕುತ್ತಾನೆ.
ನಾವು ಹೊರಗಿನ ಸೃಷ್ಟಿಯನ್ನು ಜ್ಞಾನದ ಮಾತಿನಿಂದ ಗೆಲ್ಲೋಕೆ ಹೋಗೋಕಿಂತ, ನಮ್ಮೊಳಗಿನ ಅಹಂಕಾರವನ್ನು ಬಿಟ್ಟು ಸುಮ್ಮನೆ ಸಾಕ್ಷಿಯಾಗಿ ಇರೋದನ್ನ ಅಭ್ಯಾಸ ಮಾಡಿದ್ದೇ ಆದ್ರೆ... ಅದೇ ಅರಿವಿನ ಪಥ, ಅದೇ ಮುಕ್ತಿ.
ಮಾಯಾ ಮುಕ್ತಿ - ಅರಿವಿನ ಪಥ 🚩
Sit with this Reflection in the App
Deepen this contemplation in the Maya Mukti Android app with unguided silence sessions and your private inquiry journal.
Open in Maya Mukti AppMore Inquiries & Reflections
View AllAtma Vichara • bhuthesh
ಮನವೆಂಬ ಕಳ್ಳ
ಈ ಜಗತ್ತಿನಲ್ಲಿ ಮಾನವ ಜನ್ಮದ ರಹಸ್ಯ ಮತ್ತು ಸಂಸಾರದ ಜಂಜಾಟವನ್ನು ಈ ಸಾಲುಗಳು ಅತ್ಯಂತ ಮಾರ್ಮಿಕವಾಗಿ ತಿಳಿಸುತ್ತವೆ. ನಮ್ಮ ಈ ದೇಹವು ಪಂಚಭೂತಗಳೆಂಬ ಐದು ಬಾಗಿಲುಗಳು ಮತ್ತು ನವದ್ವಾರಗಳೆಂಬ ಒಂಬತ್ತು ಕಿಟಕಿಗಳನ್ನು...
Atma Vichara • ಶ್ರೀ ರಾಂ
ಮಣ್ಣಿನಿಂದ ಮನುಷ್ಯನವರೆಗೆ ಬೆಳೆದು ಬಂದಿರುವ ಪ್ರಜ್ಞೆಯ ವಿಕಾಸವೇ ನಾವು
ರಾಷ್ಟ್ರಕವಿ ಕುವೆಂಪು ಅವರ " ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ " ಕವಿತೆಯು ಕೇವಲ ಒಂದು ಪ್ರಾರ್ಥನಾ ಗೀತೆಯಲ್ಲ; ಅದು ಜಡದಿಂದ ಚೈತನ್ಯದವರೆಗೆ ಸಾಗುವ ಜೀವ ವಿಕಾಸ (Evolution of Consciousness) ಮತ್ತು ನರನಿಂದ...